Wednesday, August 4, 2010

ಗಮನಿಸಿ ... ಬೇಕಿದ್ದರೆ ಪ್ರತಿಕ್ರಿಯಿಸಿ

ಗಮನಿಸಿ

  • ಭೂತವನ್ನು ಹೆಕ್ಕದೆ ಭವಿಷ್ಯವನ್ನು ಮುಕ್ಕದೆ ವರ್ತಮಾನವನ್ನು ಲಕ್ಷಿಸುವ ಮನುಷ್ಯನೂ ಕೂಡ ಕೇವಲ ವೀಕ್ಷಣೆಗೆ ಯೋಗ್ಯ, ಅನುಕರಣೆಗಲ್ಲ.
  • ಎಲ್ಲರೂ ಬದುಕುವ ಬದುಕು ಯಾರೊಬ್ಬರಿಗೂ ಮಾರಕವಾಗಿರದು, ಪೂರಕವಾಗಿರದು ಪ್ರೇರಕವೂ ಆಗಿರದು.
  • ಸ್ಪರ್ಧೆಯಿಲ್ಲದ ಬದುಕು ಶ್ರದ್ಧೆಯಿಂದಿರಬೇಕು.
  • ಸ್ಪರ್ಧೆಯ ಬಗ್ಗೆ ಶ್ರದ್ಧೆಬೇಡ.
  • ಸ್ಪರ್ಧೆಯು ಮನುಕುಲದ ಮಹಾಮಾರಿ.
  • ಸ್ಪರ್ಧೆಯು ಹಿಂಸೆಯ ಸೌಮ್ಯ ಸುಂದರ ಮುಖವಾಡ.
  • ಈರ್ಷೆ, ಅನೀತಿ, ಅಸೂಕ್ಷ್ಮತೆ, ಹಿಂಸೆ, ಮೋಸ ಮುಂತಾದವುಗಳು ಸ್ಪರ್ಧೆಯ ಪರಮಾಪ್ತರು.
  • ಬದುಕನ್ನು ಅನುಕರಿಸಬಾರದು, ಸುಮ್ಮನೇ ವೀಕ್ಷಿಸಬೇಕು.
  • ವಾಸ್ತವದ ಬದುಕು ವಿಸ್ತಾರವಾಗಿರಲಿ, ಇಂದಿನ ಬದುಕು ನಿನ್ನೆ-ನಾಳೆಗಳಿಂದ ಮುಕ್ತವಾಗಿರಲಿ.
  • ಇಂದು ಬದುಕಲು ನಿನ್ನೆ-ನಾಳೆಗಳ ಹಂಗೇಕೆ?
  • ಇಂದು ಎಂಬುದು ನಿನ್ನೆ-ನಾಳೆಗಳನ್ನು ಬೇರ್ಪಡಿಸುವ ಸುವರ್ಣರೇಖೆ.
  • ಬದುಕಿನ ಏರಿಳಿತಗಳನ್ನು ಇಳಿದೇರೋಣವೇ ಗೆಳೆಯ.
  • ನಿನ್ನೆಯ ಪ್ರಪಾತ ನಾಳೆಯ ಪರ್ವತ ಇವುಗಳ ಮಧ್ಯದತಾಣವೇ ಇಂದು.
  • ಭೂತ-ಭವಿಷ್ಯಗಳ ಸುಳಿಗೆ ಸಿಲುಕುವವನು ವರ್ತಮಾನವನ್ನು ಬಲಿಕೊಡುತ್ತಾನೆ.
  • ಮನುಜನ ಬದುಕು ಎಂಬುದು ಭೂತವೂ ಅಲ್ಲ, ಭವಿಷ್ಯವೂ ಅಲ್ಲ; ಅದೊಂದು ಬರೀ ವರ್ತಮಾನಮಾತ್ರ.
  • ಕಾಲಗಳು ಎರಡೇ: ಅವೆಂದರೆ ಒಂದು ಭೂತ ಇನ್ನೊಂದು ಭವಿಷ್ಯ ಎಂದು ವಾದಿಸುವವರು ವರ್ತಮಾನದಲ್ಲಿ

ಎಂದೂಬದುಕರು.

  • ಭೂತ-ಭವಿಷ್ಯಗಳ ಹೊರೆ ಹೊಂದಿರದವರು ವರ್ತಮಾನದಲ್ಲಿ ಅರಳಬಲ್ಲರು.
  • ಭೂತ-ಭವಿಷ್ಯಗಳನ್ನೆಂದೂ ಬದುಕಲಾಗದು.
  • ಇಂದ ಎಂಬುದು ನಿನ್ನೆ-ನಾಳೆಗಳ ಮಧ್ಯಬಿಂದು.
  • ನಿನ್ನೆ-ನಾಳೆಗಳನ್ನು ಸರಿದೂಗಿಸುವುದೇ ವರ್ತಮಾನ.
  • ಬುದ್ಧಿಯು ವರ್ತಮಾನದಲ್ಲಿ ಮಗ್ನವಾಗಿದ್ದಾಗ ಅದನ್ನು ನಿನ್ನೆ-ನಾಳೆಗಳು ಬಾಧಿಸುವುದಿಲ್ಲ.
  • ಇಂದಿನ ಅಂಚುಗಳೇ ನಿನ್ನೆ-ನಾಳೆಗಳು.
  • ಇಂದಿಗೆ ಹಿಂದು ಮುಂದು ಗಳು ಬೇಡವೆಂದಲ್ಲ, ಆದರೆ ಅವು ಬೇಕೇ ಎಂದೇನಿಲ್ಲ.

· ಇತಿಹಾಸವಿಲ್ಲದವನಿಗೆ ಭವಿಷ್ಯವಿಲ್ಲ ಎಂಬ ಮಾತಿನಲ್ಲಿ ಮನುಷ್ಯನಿಗೆ ವರ್ತಮಾನಮಾತ್ರ ಇದೆ ಎಂದು ಸಾರುತ್ತದೆ.

  • ಭೂತ ಕೈಜಾರಿದ್ದು, ಭವಿಷ್ಯ ಕೈಮೀರಿದ್ದು ವರ್ತಮಾನಮಾತ್ರ ಕೈಯಲಿರುವಂಥದ್ದು.
  • ಇತಿಹಾಸವು ಭವಿಷ್ಯವನ್ನು ನಿರ್ಮಿಸುತ್ತದೆ ಎಂದು ಭ್ರಮಿಸಬಾರದು.
  • ಇಂದು ನಾಳೆಯಾದೀತು, ಇಂದು ನಿನ್ನೆ ಯಾದೀತು, ಆದರೆ ನಿನ್ನೆ-ನಾಳೆಗಳು ಇಂದಾಗದು.

No comments:

Post a Comment